ಮಾವಿ ದ್ವೀಪದ ಪ್ರವಾಸ ಕಥನ

ಚಿಕ್ಕ ಚಿಕ್ಕ ಚಿಕ್ಕ ರೆಕ್ಕೆ ಪುಕ್ಕ ರೆಕ್ಕೆ

ಬಿಚ್ಚಿ ಬಿಚ್ಚಿ ಬಿಚ್ಚಿ ಎತ್ತರೆತ್ತರಕ್ಕೆ

ಹಾರಾಡೋ ಹಕ್ಕಿ ಹಕ್ಕಿಯೋ.. ತೇಲಾಡೋ ಹಕ್ಕಿ ಹಕ್ಕಿಯೋ..

ಅಲ್ಲಿ ಗಿರಿ ಗಿರಿಯೋ ಇಲ್ಲಿ ಝರಿ ಝರಿಯೋ ಓ ಮೆಘಾ ಓ ಗಾಳಿ..

ಹೆಲಿಕಾಪ್ಟರ್ ಹಕ್ಕಿ ಹಗುರವಾಗಿ ತೇಲಾಡುತ್ತ ಪಚ್ಚೆ ಮಣಿಗಳಂತಹ ಮಳೆಕಾಡಿನ ಗಿರಿ ಝರಿಗಳ, ಹವಳದೊಡಲ ನೀಲ ನೀಲ ತೀರಗಳ ಸೊಬಗನ್ನು ನನ್ನ ಕಣ್ಣ ತುಂಬ ತುಂಬಿಸುತ್ತಿತ್ತು. “ಅಮ್ಮ ಜುರಾಸಿಕ್ ಪಾರ್ಕಿನ ಓಪನಿಂಗ್ ಸೀನು ಹೇಗೆ ತೋರಿಸಿದಾರೋ ಡಿಟ್ಟೊ ಹಾಗೆ ಇದೆ.” “ಇಲ್ನೋಡು, ಪೈರೆಟ್ಸ್ ಆಫ್ ದ ಕರೀಬಿಯನ್ ಪಾರ್ಟ್ 3 ಎಂಡಿಂಗ್ ಸೀನು ಡಿಟ್ಟೋ ಇಲ್ಲೆ ತೆಗೆದಿದ್ದು” ಮಾವಿ ದ್ವೀಪದಲ್ಲಿ ಮಗನ ಮೂವಿ ಕಾಮೆಂಟರಿ ಅವ್ಯಾಹತವಾಗಿ ನಡೆದಿತ್ತು. ಒಂದಾದಮೇಲೊಂದರಂತೆ ತನ್ನ ಕಂಪ್ಯೂಟರ್ ಮೆಮೊರಿಯ ಸ್ಯಾಂಪಲ್ ಕೊಡುತ್ತಿದ್ದ ಮಗರಾಯ, ಕಳೆದ ತಿಂಗಳ ಟೆಸ್ಟಿನಲ್ಲಿ ಉತ್ತರ ಮರೆತು ಬಿ ಗ್ರೇಡ್ ತೆಗೆದಿದ್ದು ಹೇಗೆ ಅಂತ ಯೋಚಿಸುತ್ತಿರುವಾಗ, ಪುಟ್ಟ ಮಗಳು “ನಿಜವಾಗ್ಲೂ ಪೈರೆಟ್ಸ್ ಆಫ್ ದ ಕೇರಟ್ ಬೀನ್ ಇಲ್ಲೇ ತೆಗೆದದ್ದಾ?” ಎಂದಾಗ ಪೈಲೆಟ್ ಸಮೇತ ಎಲ್ಲರಿಗೂ ನಗು ಬಂದಿತ್ತು.

Maui island travelogue by Achala Sethu

ಬಾಗಿಲು ಜಡಿದು ಕುಳಿತ ಅಂಕಲ್ ಸ್ಯಾಮ್ ಮುನಿಸಿಗೊಂದಿಷ್ಟು ಕೇರ್ ಮಾಡದೆ ನಿರುಮ್ಮಳವಾಗಿ ಹವಾಯಿಗೆ ಹೊರಡುವ ತಯ್ಯಾರಿ ನಡೆಸಿದ್ದೆ. ಸದ್ಯಕ್ಕೆ ಐ.ಆರ್.ಎಸ್ ಜೊತೆ ಯಾವುಗೇ ಲೇನಾ ದೇನಾದ ಝಂಝಾಟವಿಲ್ಲ. ಸರಕಾರಿ ನೌಕರಿಯಲ್ಲಿಲ್ಲ. ದೇವರ ದಯೆಯಿಂದ ಫುಡ್ ಸ್ಟಾಂಪ್ಗಳಿಗೆ ಅರ್ಜಿ ಗುರಾಯಿಸುವ ಪ್ರಮೇಯವೂ ಇಲ್ಲ. ಅಂದ ಮೇಲೆ ‘ವಿ ದ ಪೀಪಲ್’ ಸುಖಾ ಸುಮ್ಮನೆ ತಲೆ ಬಿಸಿ ಯಾಕೆ ತಾನೆ ಮಾಡ್ಕೊಬೇಕು? ಆದರೆ, ಸಕ್ರಿಯ ಅಗ್ನಿ ಪರ್ವತ, ಕ್ರೇಟರ್ ಒಳಗೊಂಡ ಮಾವಿಯ ಹಲೇಕಲ ರಾಷ್ಟ್ರೀಯ ಉದ್ಯಾನವನ ತನ್ನೆಡೆ ಕಣ್ಣೂ ಕೂಡ ಹಾಯಿಸಲು ಬಿಡದೆ ಸರ್ಕಾರದ ಸಾಥ್ ಕೊಟ್ಟಾಗ ತಲೆ ಸ್ವಲ್ಪ ಬಿಸಿಯಾಯಿತು. ಹಾಳಾದ್ದು! ನಾವು ಹವಾಯಿಗೆ ಹೊರಟಾಗಲೇ ಸರ್ಕಾರ ಹೀಗೆ ರಚ್ಚೆ ಹಿಡಿದು ಕೂರಬೇಕಿತ್ತೇ

ಕಡಲಾಮೆಗಳ ಜೊತೆ ಜೊತೆಯಲಿ

Maui island travelogue by Achala Sethu

ಮಾವಿಯ ದಕ್ಷಿಣ ಸಮುದ್ರ ತೀರದ ಬಳಿ ‘ಟರ್ಟಲ್ ಟೌನ್’ ಹೆಸರಿನ ಸ್ನಾರ್ಕಲಿಂಗ್ ತಾಣವಿದೆ. ಮೈಲುಗಟ್ಟಲೆ ಉರುಟು ಉರುಟಾದ ಹವಳ ಹಬ್ಬುಗಳ ಹಾಸಿನ ಮೇಲೆ, ಕೊರಕಲುಗಳ ಸಂದಿ ಗೊಂದಿಗಳಲ್ಲಿ ಸುಳಿದಾಡುವ ಬಣ್ಣ ಬಣ್ಣದ ಮೀನು, ಕಡಲಾಮೆಗಳನ್ನು ನೀರ ಮೇಲೆ ತೇಲುತ್ತಾ ಈಜುತ್ತಾ ನೋಡಬಹುದು. ಇದು ನನ್ನ ಮೊದಲ ಸ್ನಾರ್ಕಲಿಂಗ್ ಅನುಭವ. ನೀರಿಗೆ ಬಿದ್ದೆ. ಕಡಲಿನ ‘ಆಳ’ದ ಅರಿವಿನ ಜೊತೆ ಕೆಲ ತಿಂಗಳುಗಳ ಹಿಂದೆ ಮಾವಿ ಬೀಚಿನ ಬಳಿ ಆಗಿದ್ದ ‘ಶಾರ್ಕ್ ಅಟಾಕ್’ ನೆನಪಿಗೆ ಬರಬೇಕೆ! ನನ್ನವ ಬೇರೆ ಸರ ಸರ ಈಜುತ್ತಾ ಮುಂದೆ ಮುಂದೆ. ತುಂಬ ಹೆದರಿಕೆಯಾದಾಗ ನನ್ನ ಮೇಲೆ ರೌಡಿ ರಂಗಿಯ ಆತ್ಮವೊಂದು ಅಮರಿಕೊಳ್ತಿರತ್ತೆ. ವಿಚಿತ್ರವಾದ ಡಿಫೆನ್ಸ್ ಮೆಕಾನಿಸಮ್ಮು. “ಲೋ ಮಗನೇ ಬಾರೊ ಇಲ್ಲಿ! ಎಲ್ಲೋಡೋಯ್ತಾ ಇದ್ಯಾ!” ಕಿರುಚಿದೆ. ಹಿಂದೆ ಬಂದ. “ಲೈಫ್ ಜಾಕೆಟ್ ಹಾಕ್ಕೊಂಡಿದೀಯಲ್ಲೇ, ಗುಗ್ಗು” ಅರೆ ಹೌದಲ್ಲ! ಮುಳಗಬೇಕು ಅಂದರೂ ಆಗಲ್ಲ. ಅದೂ ಅಲ್ಲದೆ ನಾನು ಬ್ಯಾಕ್ ಸ್ಟ್ರೋಕು ಹೊಡೆಯೋದರಲ್ಲಿ ಪಂಟರ್ರು! ಮರೆತೇ ಹೋಗಿತ್ತು! ಹುಳ್ಳಗೆ ಸುತ್ತಲೂ ನೋಡಿದೆ. ಯಾರೂ ಗಮನಿಸಿದಂತೆ ಕಾಣಲಿಲ್ಲ. ಜೊತೆಯಲ್ಲಿದ್ದ ಸ್ನೇಹಿತರಿಗಾರು ಕನ್ನಡ ಬಾರದಿರುವುದು ಒಂಥರ ಸಮಾಧಾನವಾಯಿತು.

Maui island travelogue by Achala Sethu

ಅಕ್ಟೋಬರ್ ತಿಂಗಳಿನಲ್ಲೂ ಮೈ ನಡುಗಿಸದ ಬೆಚ್ಚನೆ ನೀರಲ್ಲಿ ನೋಡಲು ಸಿಗುವ ಬಣ್ಣ ಬಣ್ಣದ ಮೀನುಗಳ ಗುಂಪು, ಹಾವಿನಂತೆ ಸರಿಯುವ ಈಲ್, ತಳದಲ್ಲಿ ಸತ್ತಂತೆ ಮಲಗಿರುವ ಸ್ಟಾರ್ ಫಿಶ್, ಕಂದು ಕೋರಲ್ ದಿಬ್ಬಗಳ ಮೇಲೆ ಜೀವಂತ ಕೋರಲ್ಗಳು! ನನ್ನಿಂದ ಹತ್ತಾರು ಅಡಿಗಳ ಅಂತರದಲ್ಲಿ ಕೆಳಗಿನ ಕೊರಕಲ ಗವಿಯಿಂದ ದೊದ್ದ ನೀರಾಮೆಯೊಂದು ನಿಧಾನವಾಗಿ ನೀರಿನ ಮೇಲ್ಮೈಗೆ ಉಸಿರೆಳೆಯಲು ಬಂತು. ತನ್ನ ಸುತ್ತ ಮುತ್ತಲ ಹುಲು ಮಾನವರ ಉದ್ವೇಗ ಉನ್ಮೇಷಗಳಿಗೆ ಸ್ವಲ್ಪವೂ ಅಳುಕದೆ, ಪೋಸ್ ಕೊಟ್ಟು ಫೋಟೊ ತೆಗೆಸಿಕೊಂಡು ವಾಪಸ್ ನಿಧಾನವಾಗಿ ತನ್ನ ಗವಿಯೊಳಗೆ ಸರಿಯಿತು.

ರೋಡ್ ಟು ಹ್ಯಾನ
ರೋಡ್ ಟು ಹ್ಯಾನ ರಸ್ತೆಗಳಿಗು ಸೆಲಬ್ರಿಟಿ ಸ್ಟೇಟಸ್ ಕೊಡಬಹುದಾದರೆ ‘ರೋಡ್ ಟು ಹ್ಯಾನ’ ಖಂಡಿತವಾಗಿ ಅಮೆರಿಕೆಯ ಟಾಪ್ 10 ರಸ್ತೆಗಳಲ್ಲಿ ಒಂದಾಗಿ ಮಿಂಚುತ್ತದೆ. ಕಹುಲಾಯಿ ಪ್ರದೇಶದಿಂದ ಹೊರಟು 50 ಮೈಲು ದೂರದ ಪುಟ್ಟ ಹಳ್ಳಿ ಹ್ಯಾನ ತಲುಪುವ ಈ ನೀಳ ಕಾಯದ ವೈಯ್ಯಾರಿಯ ಮೈ ತುಂಬ ಆರುನೂರಕ್ಕೂ ಹೆಚ್ಚಿನ ಹೇರ್ಪಿನ್ ಡೊಂಕುಗಳು. ಟ್ರಾವೆಲ್ ಸಿಕ್ನೆಸ್ನಿಂದ ಬಳಲುವ ನನ್ನಂತವರಂತೂ ದಾರಿಯಲ್ಲಿ ‘ವಯಕ್’ ಅನ್ನದಿರಲು ಊಟ ತಿಂಡಿಗಳ ವಿಷಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿರಬೇಕು. ಹಾಗಿದ್ದಲ್ಲಿ ಮಾತ್ರ ಹಸಿರು ಮಳೆಕಾಡಿನ ಎಗ್ಜಾಟಿಕ್ ಮರಗಿಡಗಳ, ಅಡಿಗಡಿಗೂ ಸಿಗುವ ಸಣ್ಣ ಪುಟ್ಟ ಜಲಪಾತಗಳ, ಹೊಳೆ ಹೊಳೆವ ನುಣುಪು ಲಾವ ಕಲ್ಲುಗಳು ತುಂಬಿರುವ ಸಮುದ್ರ ತೀರಗಳ ಸೌಂದರ್ಯವನ್ನು ಮನಃಪೂರ್ತಿ ಅನುಭವಿಸಬಹುದು.

ಭಾರತದ ಆಲದ ಮರಿ

Maui island travelogue by Achala Sethu

ಲಹೈನ ಮಾರ್ಕೆಟ್ ಮಧ್ಯದಲ್ಲಿ, ಮುನಿಸಿಪಲ್ ಕೋರ್ಟ್ ಹೌಸಿನ ಎದುರು ಬೃಹತ್ತಾದ ಆಲದ ಮರವೊಂದಿದೆ. ಅರವತ್ತು ಅಡಿ ಎತ್ತರವಿದ್ದು ವಿಶಾಲವಾಗಿ ಹರಡಿರುವ ಈ ಮರ ಭಾರತದಿಂದ 1873ರಲ್ಲಿ ಮಾವಿಗೆ ಬಂದಾಗ 8 ಅಡಿ ಎತ್ತರದ ಪುಟ್ಟ ಆಲದ ಮರಿಯಂತೆ. ಲೋಕಲ್ ಬನಿಯಾಗಳಿಗೆ ತನ್ನ ತಂಪು ನೆರಳಡಿಯಲ್ಲಿ ಆಶ್ರಯ ಕೊಟ್ಟು, ತಲೆ ಎತ್ತಿ ನಿಂತ ನನ್ನ ಭಾರತದ ರಾಷ್ಟ್ರವೃಕ್ಷದ ಬಗ್ಗೆ ಭಾವುಕವಾಗಿ ಏನೇನೋ ಅನ್ನಿಸಿತು.

(ದಟ್ಸ್ ಕನ್ನಡ ಡಾಟ್ ಕಾಮ್ ಪ್ರಕಟಿತ )

*****

Advertisements

ಸಾವಿನ ಕಣಿವೆಯಲ್ಲೊಂದು ವಲಸೆ ಹಕ್ಕಿಯ ದಿನ

ವಲಸೆ ಹಕ್ಕಿ
ಶುಕ್ರವಾರ, 15 ಫೆಬ್ರವರಿ 2013 (02:16 IST)
 Image result for death valley

ಅಮೆರಿಕಾದ ದಕ್ಷಿಣ ಭಾಗದಲ್ಲಿರುವ ಅತ್ಯಂತ ತಗ್ಗಿನ ಪ್ರದೇಶ, ನೆವಾಡ ಹಾಗು ಕ್ಯಾಲಿಫ಼ೊರ್ನಿಯ ರಾಜ್ಯಗಳಲ್ಲಿ ಹರಡಿರುವ ಸಾವಿನ ಕಣಿವೆ ರಾಷ್ಟ್ರೀಯ  ಉದ್ಯಾನವನದಲ್ಲಿದೆ. ಇದು ಅಮೇರಿಕೆಯೆ ಅತ್ಯಂತ ಒಣ ಹಾಗು ಗರ್ಮಾ ಗರಂ ತಾಣ ಎಂದು ಮಗನ, ಭೂಗೋಳ-ಬೀ ಸ್ಪರ್ಧೆಗೆ ತಯ್ಯಾರಿ ನೆಡೆಸುತ್ತಾ ಓದಿಸುವಾಗ, ಕಡು ಬೇಸಿಗೆಯ ಕುದಿ ತಾಪದ ನಿರ್ಜನ ನಿರ್ಜಲ ಕಾಲುದಾರಿಗಳಲ್ಲಿ ನಿರ್ಮಲ ಸೌಂದರ್ಯ ಅರೆಸಲು ಹೋಗಿ ಒಣಗಿ ಒದ್ದಾಡುವ ಶೂರರ ವೀರಗಾಥೆಗಳನ್ನು ಕೇಳುವಾಗ, ಊರು ಸುತ್ತುವ ಉತ್ಸಾಹಿಯಾದ ನನ್ನಲ್ಲಿ ಕುತೂಹಲ ಮೂಡುತ್ತಿದ್ದರೂ ಹೋಗುವ ಸಂದರ್ಭ ಮಾತ್ರ ಒದಗಿ ಬಂದಿರಲಿಲ್ಲ.

ದಿಢೀರ್ ಅಂತ ಹೀಗೆ ಒಂದು ವಾರಂತ್ಯದಲ್ಲಿ ೨೦೧೨ರ ಡಿಸೆಂಬರ್ ಇಪ್ಪತ್ತೊಂದಕ್ಕೆ ಸಮರೇಖೆಯಲ್ಲಿ ನಿಲ್ಲದ ತಾರೆಗಳೆಲ್ಲ ಸಮನಾಗಿ ನಿಂತು ಪ್ರಸಾದಿಸಿದ ಒಂದು ಶುಭ ಮುಹೂರ್ತದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು. ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ. ಸಿಟಿಯ ಗೌಜು ಗದ್ದಲಗಳಿಂದ ದೂರ ಸಾಗುತ್ತಾ, ರಸ್ತೆಯ ಎರಡೂ ಬದಿಯಲ್ಲಿ ಕಾಣುವ Yucca palm ಮತ್ತು ಕುರುಚುಲುಗಳನ್ನು ಸರಿಸುತ್ತ ಆವರಿಸುವ ಮೊಹಾವೆ ಮರುಭೂಮಿಯ ಅಗಾಧ, ನಿಗೂಢ ಅನುಭೂತಿಯನ್ನು ಎದೆಯೊಳಗಿಳಿಸುತ್ತ ಫ಼ರ್ನೆಸ್ ಕ್ರೀಕ್ ವಿಸಿಟರ್ ಸೆಂಟರ್ ತಲುಪಿದೆವು.

ರಾತ್ರಿ ತಿರುಗಿ ಊರಿಗೆ ಮರಳುವ ಉದ್ದೇಶ ಇದ್ದುದದರಿಂದ, ವಿಸಿಟರ್ ಸೆಂಟನಲ್ಲಿ ಸಿಕ್ಕ ಪಾರ್ಕಿನ ನಕಾಶೆ ಹಿಡಿದು ಸಂಜೆ ಒಳಗೆ ನೋಡಲೇಬೇಕಾದ ಸ್ಥಳಗಳನ್ನ ಶಾರ್ಟ್ ಲಿಸ್ಟ್ ಮಾಡ್ತಾ ನಿಂತೆವು. ನನಗೆ ಯಾವಾಗಲೂ ಹಾಗೇ! ಅಂಕಿ ಅಂಶಗಳಿರುವ ಯಾವುದೇ pamphlet ಕೈಗೆ ಬಂದರೂ ತಕ್ಷಣ ಅದರಲ್ಲಿರುವ ವಿವರಗಳನ್ನೆಲ್ಲ ಅರಗಿಸಿಕೊಂದು ಪರೀಕ್ಷೆಗೆ (?) ಉರು ಹೊಡೆದು ರೆಡಿ ಆಗಬೇಕೆನ್ನಿಸುವಂತಹ ಅಬ್ಸೆಶನ್ ಶುರುವಾಗತ್ತೆ. ಇದು ಕಾರ್ಪೊರಲ್ ಪನಿಶ್ಮೆಂಟಿನ ಮಹಾತ್ಮೇನೇ ಇರಬಹುದು! ಜೊತೆಗೆ ಮಗರಾಯನ ತಲೆಗೂ ತುಂಬುವ ಚಪಲ. ಮರೀ, ಹಾಟೆಸ್ಟ್ ಟೆಂಪರೆಚರ್ರು ಇಲ್ಲಿ ರೆಕಾರ್ಡ್ ಆಗಿರೋದು ಎಷ್ಟು ಗೊತ್ತ? ೧೩೪ ಡಿಗ್ರಿ fahrenheit. ಅಂದರೆ ೫೧.೧ ಡಿಗ್ರಿ ಸೆಲ್ಸಿಯಸ್ಸು. ಹೆಂಗೆ ಕನ್ವರ್ಟ್ ಮಾಡೋದು ಹೇಳು ನೋಡೋಣ? ಡೆತ್ ವ್ಯಾಲಿಗೆ ಆ ಹೆಸರು ಬಂದದ್ದು

ಕ್ಯಾಲಿಫ಼ೋರ್ನಿಯ ಗೋಲ್ಡ್ ರಶ್ ಸಮಯದಲ್ಲಿ.ಅದು ಯಾವಾಗಾಗಿದ್ದು ಹೇಳು? ಮರಿ ಮಾತಾಡದೆ ಅಪ್ಪನ ಕೈ ಹಿಡಿದು ಎಳೆಯುತ್ತಾ ಬೇಗ ಬೇಗ ಮುಂದೆ ನಡೆಯಿತು.

ಜ಼ಬ್ರಿಸ್ಕಿ ಪಾಯಿಂಟ್

ಪಾರ್ಕಿಂಗ್ ಲಾಟಿನಲ್ಲಿ ಕಾರು ನಿಲ್ಲಿಸಿ, ಕಾಲು ಮೈಲಿಯಷ್ಟು ದೂರ ತಗ್ಗಿನ ದಿಣ್ಣೆಯ ಮೇಲೆ ನೆಡೆದು ಜ಼ಬ್ರಿಸ್ಕಿ ಪಾಯಿಂಟ್ ತಲುಪಿದೆವು. ಮಂತ್ರಮುಗ್ಧ ಅನ್ನೊ ಪದದ ಅರ್ಥ ವ್ಯಾಪ್ತಿ ಎಲ್ಲ ಅನುಭವಕ್ಕೆ ಬಂದದ್ದು ನೂರಾರು ಮೈಲಿ ಹರಡಿದ, ಜತನದಿಂದ ಬಣ್ಣ ವಿನ್ಯಾಸಗಳನ್ನು ಸಂಯೋಜಿಸಿ ಕೆತ್ತಿದಂತೆ ಕಾಣುವ ಪದರ ಕಲ್ಲುಗಳ ದರಿ ದಿಣ್ಣೆಗಳನ್ನು (badlands) ನೋಡಿದಾಗ. ಮಿಲಿಯನ್ ಗಟ್ಟಲೆ ವರುಷಗಳ ಗಾಳಿ ಮತ್ತು ನೀರಿನ ಭೂಕೊರೆತದಿಂದ ನಿರ್ಮಾಣಗೊಂಡಿರುವ ಈ ಭೂರಚನೆಯ ವಿಹಂಗಮ ನೋಟವನ್ನು ಸೂರ್ಯಾಸ್ತದ ಸಮಯದಲ್ಲಿ ಛಿಚಿmeಡಿಚಿ ಕಣ್ಣಿಂದ ಸೆರೆಹಿಡಿಯುವುದು ಅನೇಕ ಪ್ರವಾಸಿಗರ ಆದ್ಯತೆ.

ಕೆಟ್ಟನೀರಿನ ತೊಟ್ಟಿ

ಸಮುದ್ರ ಮಟ್ಟದಿಂದ ೨೮೨ ಅಡಿ ಕೆಳಗಿರುವ Bad ವಾಟರ್ ಬೇಸಿನ್ ದಕ್ಷಿಣ ಅಮೇರಿಕಾದ ಅತ್ಯಂತ ತಗ್ಗಿನ ಪ್ರದೇಶ. ಪಾರ್ಕಿಂಗ್ ಲಾಟಿಗೆ ಹೊಂದಿಕೊಂಡಂತೆ ಇರುವ ಪುಟ್ಟ ಮರದ ಸೇತುವೆ ಮೇಲೆ ನಡೆಯುತ್ತಿದ್ದಂತೆ ಎದುರಾದ ಬಟ್ಟಾ ಬಯಲ ತುಂಬಾ ಸ್ನೋ! ಅರೆರೆ ಇದೇನು, ಎಪ್ಪತ್ತೈದು ಡಿಗ್ರಿ ಬೆಚ್ಚನೆಯ ಬಿಸಿಲಲ್ಲಿ ಎಂದು ಅಚ್ಚರಿಯಿಂದ ಹತ್ತಿರ ಹೋಗಿ ನೋಡಿದರೆ ಅದು ಹಿಮವಲ್ಲ, ಉಪ್ಪು! ಬಯಲ ತುಂಬ ಸಾಪಾಟಾಗಿ ಜೇನುಗೂಡಿನ ವಿನ್ಯಾಸದಲ್ಲಿ ಐದಾರು ಮೈಲಿಗಳವರೆಗೆ ಹರಡಿರುವ ಉಪ್ಪಿನ ಬಿಲ್ಲೆಗಳು, ಪುರಾತನ ಇತಿಹಾಸ ಪೂರ್ವದ ಕೆರೆಗಳು ಮರೆಯಾಗಿ ಉಳಿಸಿದ ಲವಣ ಮತ್ತು ಖನಿಜಗಳ ಸಾಂದ್ರ ಕೊಳಗಳ ಅವಶೇಷವಂತೆ. ತೂಬಿಲ್ಲದ ತೊಟ್ಟಿಯನ್ನು ಮತ್ತೆ ಮತ್ತೆ ತುಂಬುವ ಮಳೆನೀರು ಆವಿಯಾಗುವಾಗ ಹೀರಿದ ಕೆರೆಯ ಉಪ್ಪನ್ನು ಕೆರೆಗೆ ಚೆಲ್ಲುತ್ತದೆ. ಕರಕರ ಅನ್ನಿಸುವ ಉಪ್ಪಿನ ಮೈದಾನದಲ್ಲಿ ಸುಮಾರು ಹೊತ್ತು ನಡೆದಾಡಿ ಮಕ್ಕಳು ಕಾತುರದಿಂದ ಕಾಯುತ್ತಿದ್ದ ಮರಳು ದಿಣ್ಣೆಗಳೆಡೆ ಹೊರೆಟೆವು.

ಗ-ಮ-ಪ ಹಾಡುವ ಯುರೇಕಾ ದಿಣ್ಣೆ

ಮೂವತ್ನಾಲ್ಕು ಲಕ್ಷ ಎಕರೆಗಳಷ್ಟು ವಿಸ್ತಾರದ ಡೆತ್ ವ್ಯಾಲಿ ಪಾರ್ಕಿನ ಶೇಕಡ ಒಂದಕ್ಕಿಂತ ಕಡಿಮೆ ಭೂಭಾಗವು ಮರಳುದಿಣ್ಣೆಗಳಿಂದ ಆವೃತವಾಗಿದೆ. ಈ ಮರಳು ದಿಣ್ಣೆಗಳಲ್ಲಿ ಅತ್ಯಂತ ಎತ್ತರದ ಯುರೇಕಾ (೬೮೦ ಅಡಿಗಳು) ಭೂಮಿಯ ಕೆಲವೆಡೆ ಮಾತ್ರ ಕಂಡುಬರುವ ಅಪರೂಪದ ಸಿಂಗಿಂಗ್ ಡ್ಯೂನ್.ಮರಳ ಕಣಗಳು ಗುಪ್ಪೆಯ ಇಳಿಜಾರಿನಲ್ಲಿ ಒಟ್ಟಗಿ ಜಾರಿ ಜಾರಿ ಸರಿಯುವಾಗಲೆಲ್ಲಾ, ಗ,ಮ,ಪ ಶೃತಿಗಳಲ್ಲಿ ಯುರೇಕ ಝೇಂಕರಿಸುವುದನ್ನು ಕೇಳಬಹುದಂತೆ. ಅಪರೂಪದ ಈ ಹಾಡುಗಾರ್ತಿಯ ಝೇಂಕಾರ ಕೇಳಲು ಅದಮ್ಯ ಕುತೂಹಲವಿದ್ದರೂ, ಈಗಾಗಲೆ ದಣಿದಿರುವ ಚಿಳ್ಳೆ ಪಿಳ್ಳೆಗಳು ಅಷ್ಟು ದೂರ ನಡೆದು ಏರಿ ಜಾರಿ ಮಾಡುವುದರಲ್ಲಿ ತೆರೆಯುವ ಸ್ವರದ ಮುಂದೆ ಬೇರಾರ ಸಂಗೀತವು ಕೇಳುವುದಿಲ್ಲವಲ್ಲ! ಹತ್ತಿರದಲ್ಲೇ ರಸ್ತೆಯ ಬದಿಯಲ್ಲಿ ಕಾಣುವ ಪುಟ್ಟ mesquite  ದಿಣ್ಣೆಗಳಿಗೆ ಒಂದು ಕ್ವಿಕ್ ವಿಸಿಟ್ ಹಾಕಿ ಹೊರಡೋಣ ಎನ್ನುತ್ತ ಹೊರೆಟೆವು. ಮರಳಾಟ ಕಳೆ ಕಟ್ಟುತ್ತಿರುವಾಗಲೇ ಮಿಸ್ಟರ್ ಸೂರ್ಯ ಬಾನ ತುಂಬ ಕನ್ಫೆಟ್ಟಿಗಳನ್ನೆರಚುತ್ತ So dawn has gone and we did not say good byeಎಂದು ಪೊಲೈಟಾಗಿ ಪಡುವಣಕ್ಕೆ ಜಾರುವ ತಯ್ಯಾರಿ ನಡೆಸಿದ.

Votes:  6     Rating: 3.83         
ಕೆಂಡಸಂಪಿಗೆಗೆ ಸ್ವಾಗತ. ಲೇಖನ ಚೆನ್ನಾಗಿದೆ! ಆದರೆ . . ಯಾರಪ್ಪ ಇದು ? ನಾನು ಇಲ್ಲೇ ಹತ್ತಿರದಲ್ಲೇ ಇರೋ ನಿಗೂ ಗೊತ್ತಾಗ್ತಾ ಇಲ್ಲವಲ್ಲ ಈ ವಲಸೆ ಹಕ್ಕಿ ಜಾಡು!…
madam, thamminda innondastu barahagaLannu nireekshe maadtheeni. chennagide. Best wishes…
 ವಲಸೆ ಹಕ್ಕಿಗೆ ಸ್ವಾಗತ! ………… ಪೆಜತ್ತಾಯ ಎಸ್. ಎಮ್….

ಗೆಳತಿಯ ಭೂತ

ಗೆಳತಿಯ ನೋಡಲು ಹೋದರೆ
ಸಿಕ್ಕಿದ್ದು ಅವಳನ್ನು ಕೊಂದೆನೆನ್ನುವ ಭೂತ

 

ಕುಸಿವ ಜೀವಕೆ ಉಸಿರ ತುಂಬುತಲೆ

ಕೊಂದೆಯೇಕೆ ಎಂದರೆ-“ನಾನು ಬದುಕಲು” ಎನ್ನಬೇಕೆ ಭಂಡ ಭೂತ!

 

ಶುರು ಮಾಡಿತು ತಕಥೈ ನಾಟ್ಯ ನನ್ನಣಗಿಸಲು
ಕೋಡುಗಳ ಝಳಪಿಸಿ ಕೆಂಗಣ್ಣುಗಳ ಹೊಳಪಿಸಿ
ಹೂಂಕರಿಸಿ..ಟೇಂಕರಿಸಿ…
ಬಗೆದು ಗುಂಡಿಗೆಯ ಬಿಡಿಸಿ ನೆತ್ತರಿನ ಚಿತ್ತಾರ
ನನ್ನೆದೆಯ ಅಂಗಳದಲಿ ಕುಣಿದಾಡಿ ಮೆರೆಯಿತು

 

ತಕಧಿಮಿಯ ತಾಳದ ಅಬ್ಬರದ ಮೇಳವು
ನುಸುಳಿ ನನ್ನೊಳಗೂ ಉಸುರುವಾಗಲೇ ಲಯದ ಕಲೆ
ಕೊಸರಿ ನಿಂತೆ.. ನಿಂತು ನಡೆದೆ

 

ಹೊರಟಾಗ ನಿಲ್ಲಿಸಿತು ಕರೆಯೊಂದು ಕೂಗಿ
ಹಿಂತಿರುಗಿ ನೋಡಿದರೆ…ಅರಳುತಿದ್ದಳು ಗೆಳತಿ
ಕರಗುತ್ತಿದ್ದ ಭೂತದ ನೆರಳಿನಲ್ಲಿ!

Maya calendar

 This is the infamous Maya calendar which predicts the end of our world with an apocalyptic event in December 2012.The intricate pattern of circles,cones and the other symbols supposedly explain the cycle of time from Mayan point of view.

Even though my simple mind found it too complicated to understand or appreciate the astronomical abilities of Mayans, the sheer serendipity of this souvenir finding the person it’s meant to be with…which is me… is mind blowing 🙂 I have mounted it on my living room wall as a constant remainder to “live” everyday to the fullest…till the final curtain falls down!

A fine balance

It was quite sometime since i read a serious novel. Hustle and bustle of a busy life and an age instilled apathy towards romance and ambition left me with no choice but to skim through colorful magazines and to dig deep into philosophical books 🙂

Frequent visits to our public library during this year’s spring break, however, mysteriously brought Rohinton’s Mistry’s novel “A fine balance” into my hands!

Well…not mysterious if you understand what i was craving subconsciously…Balance!! Yes… a fine balance was what i needed during those chaotic holiday times with sensitive princesses and macho power rangers 🙂

Anyways…Rohinton is no stranger to me. I have a history with Mistry! you got it…have read a few of his short stories and novels.

A fine balance revolves around four characters-dina, Ishwar, Om and Maneck. the author has the ability to completely immerse the readers with their lives. You’ll find yourself sympathizing with them as they try to make ends meet, laughing at their escapades and hilarious one liners and crying at the heavy injustice inflicted upon their lives.

towards the end, after about 600 pages of long journey and bonding with the characters, i was hoping to rekindle my spirit with a profound lesson on the resilience of the human spirit, strength to carry on with dignity and acceptance no matter what. NO..no such thing happens! Just despair, despair and more despair 😦

I wasn’t expecting a Bollywood story from the author but the unexpected atrocious ending put me in a gloomy mood.

My little angels helped me to find “closure” sooner than what i thought possible. Next time wouldn’t venture into serious fiction before reading the reviews or planning additional recouping time!

ಅನಿವಾಸಿ ಅಮ್ಮನ ಅಂತರಂಗದಿಂದ ~ ಬೈ ಬೈ ಸವಾನ

ಹತ್ತು ವರುಷಗಳ ಬೇರು ಕಿತ್ತು ಪೂರ್ವ ಕರಾವಳಿಯಿಂದ ಪಶ್ಚಿಮಕ್ಕೆ ಬಂದ ಹೊಸತು. ಸಿನ್ ಸಿಟಿಯ ಚಮಕು ಧಮಕು, ಬಹಳ ದಿವಸಗಳ ನಂತರದ ಅಪಾರ್ಟ್ಮೆಂಟ್ ವಾಸ, ಕೊರೆವ ಒಂಟಿತನ ಹೀಗೆ ಎಲ್ಲಾದರಲ್ಲೂ ಬದಲಾವಣೆಯ ಬೆಳಕಿನಿಂದ ಎದ್ದು ಕಾಣೋ ಹೊಸತನ ನನಗೆ ಹಿತವೆನಿಸುತ್ತಿದ್ದರೂ, ಹಿಂಡು ಗೆಳೆಯರನ್ನು ಹಿಂದೆ ಬಿಟ್ಟು ಬಂದ ಮಗರಾಯ ಹೊಸ ಪರಿಸರಕ್ಕೆ ಹೇಗೆ ಹೊಂದ್ಕೊತಾನೋ ಏನೋ ಅನ್ನೋ ಚಿಂತೆ ಕಾಡಿತ್ತು.

ಸ್ಕೂಲು ಶುರುವಾಗಲು ಇನ್ನು ಒಂದು ತಿಂಗಳು ಬಾಕಿ ಇತ್ತು. ಹತ್ತು ತಿಂಗಳ ಮಗಳನ್ನು ಆರು ವರುಷದ ಮಗನನ್ನು ಕಟ್ಟಿಕೊಂಡು ಮಾಲು ಪೂಲು ಅಂತ ದಿನಕ್ಕೊಂದು ಕಡೆ ಅಲೀತಿರುವಾಗಲೇ ಸವಾನ ಪರಿಚಯವಾಗಿದ್ದಳು. ನಾವಿದ್ದ ಬಿಲ್ಡಿಂಗಿನ ಕೆಳಗಡೆ  ಸಾಲಿನ ಕೊನೆಯ ಮನೆಯ ಮುದ್ದು ಸ್ಪಾನಿಶ್ ಪೋರಿ.
ರಾತ್ರಿಯಾದರೂ ಮುಗಿಯದ ಬೇಸಿಗೆ ಸಂಜೆಗಳಲ್ಲಿ ಮಗನ ಜೊತೆ ಸೈಕಲ್ ಹೊಡಿತಾ, ನಾನು ಕಲೆಸಿ ಕೊಡುವ ಸಾರನ್ನ ಹುಳಿಯನ್ನಗಳನ್ನ  ಚಪ್ಪರಿಸಿ ತಿನ್ನುತ್ತಾ, “ರ”ಕಾರ ಹೊರಡದೆ ವಚಿ ವಚಿ ಅಂತ ಮಗಳು ರಚ್ಚಿನ ಮುದ್ದಿಸುತ್ತ ಬಲು ಬೇಗ ನಮ್ಮೆಲ್ಲರ ಅನಿವಾರ್ಯ ಅನ್ನೋ ಮಟ್ಟಿಗೆ ಹತ್ತಿರವಾದಳು.
ಅವಳ ಅಮ್ಮ ಕೂಡ ತುಂಬಾ ಸ್ನೇಹಪರ ಹೆಂಗಸು. ಮೂರೂ ಮಕ್ಕಳ ಸಂಸಾರ ನಿಭಾಯಿಸಿಕೊಂಡು ಕಮ್ಯುನಿಟಿ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಮುಗಿಸುವ ಹಂತದಲ್ಲಿದ್ದಳು. ಹೀಗೆ ಯಾವಾಗಲಾದರು “ಸ್ಮಾಲ್ ಟಾಕ್” ಗೆ ಸಿಗುವಾಗ ಬಾಯಿತುಂಬಾ ತನ್ನ ಆರಕ್ಕೇರದ ಮೂರಕ್ಕಿಳಿಯದ ಸುಖಿ ಸಂಸಾರದ ಬಗ್ಗೆ ಗಲಗಲಾಂತ ಅಭಿಮಾನದಿಂದ ಮಾತನಾಡಿಬಿಡೋಳು.
ಫೆಬ್ರುವರಿಯ  ಚುಮು ಚುಮು ಛಳಿಯ ರಾತ್ರಿ.ಮನೆಯ ಕಡೆ ಒಬ್ಬಳೇ ಹೆಜ್ಜೆ ಹಾಕುತ್ತಿದ್ದೆ.ಬಿಕೋ ಅಂತ ಇದ್ದ ಹಾದಿಯಲ್ಲಿ ಮುಸುಕು ಹೊದ್ದು ಕಳ್ಳ ಹೆಜ್ಜೆ ಇಡುತ್ತಾ ಸವಾನ ಪರಿವಾರ ಎಲ್ಲೋ ಹೊರಟ ಹಾಗಿತ್ತು. “ಅದು ನಮ್ಮಪ್ಪ ಚನ್ನಾಗಿ ಕುಡಿದು ಬಂದಿದಾನೆ.ಅವನ ಹತ್ರ ಗನ್ ಬೇರೆ ಇದೆಯಲ್ಲ..ಏನು ಮಾಡ್ತಾನೊಂತ ನಮಗೆಲ್ಲ ಹೆದರಿಕೆ.ಅದಕ್ಕೆ ಸ್ವಲ್ಪ ಹೊತ್ತು ಈಚೆ ಅಡಗಿದ್ದು ಆಮೇಲೆ ಮನೆಗೆ ಹೋಗ್ತಿವಿ.ಅವನು ಹೀಗೆ ಆಡ್ತಾಇದ್ರೆ ಅವನ ಜೊತೆ ನಾವು ಇರಕ್ಕಾಗಲ್ಲ ಅಂತ ಅಮ್ಮ ಹೇಳ್ತಾಳೆ” ಯಾವುದೇ ಅವಸರವಿಲ್ಲದೆ ಇವೆಲ್ಲಾ ತನಗೆ ಮಾಮೂಲು ಅನ್ನೋ  ಧಾಟಿಯಲ್ಲಿ  ವರದಿ  ಒಪ್ಪಿಸಿ  ಸವಾನ ಮುಸುಕುಧಾರಿಗಳ ಜೊತೆ ಕತ್ತಲಲ್ಲಿ ಕರಗಿಹೋದಳು.
ಈ ಪ್ರಕರಣದ ಬಗ್ಗೆ ನಾನು ಅವಳನ್ನು ಮುಂದೇನು ಕೇಳಲಿಲ್ಲ. ಮನೆಗೆ ಶಿಫ್ಟ್ ಆದಮೇಲೆ ಎರಡು ಮೂರೂ ತಿಂಗಳು ಮತ್ತೆ ಅಪಾರ್ಟ್ಮೆಂಟ್ ಕಡೆ ಬರಲಾಗಲಿಲ್ಲ. ಮಗನ ಹುಟ್ಟು ಹಬ್ಬದ ಇನ್ವಿಟೇಶನ್ ಕೊಡಲು ಬಂದಾಗಲೇ ಸವಾನ ಪರಿವಾರ ಅಲ್ಲಿಂದ ಹೊರಟುಹೋದ ಸುದ್ದಿ ತಿಳಿದಿದ್ದು. “ಅಮ್ಮ ಇನ್ನೆಂದು ನಾವವಳನ್ನ ನೋಡೋದೇ ಇಲ್ಲ ಅಲ್ವ” ಮಗನ ಮಾತಿಗೆ ಕಣ್ಣು ತೇವವಾಯಿತು.
ಯಾವಾಗಲಂದರೆ ಆವಾಗ ಬಾಗಿಲು ತಟ್ಟುತ್ತಾ “ಆಡಲು ಒಳಗೆ ಬರಲಾ” ಎಂದು ಕೇಳುತ್ತಿದ್ದ ಹುಡುಗಿ ಸದ್ದಿಲ್ಲದೇ ಮತ್ತೆಂದು ಸಿಗದಂತೆ ಸರಿದು ಹೋಗಿದ್ದಳು.
ಬೈ ಬೈ ಸವಾನ…ಆಲ್ ದಿ ಬೆಸ್ಟ್!

My perception of Inception

 I recently saw Christopher Nolan’s latest flick Inception and thoroughly enjoyed it. The movie definitely makes the viewer question at least once about the reality of our everyday world and falsehood of this enchanting, bewitching and seemingly unreal dream world in which we find ourselves often in.
 
The purpose of this blog post however is not the analysis of the plot, film maker’s angle or the amazing technicalities….nope…not at all!

For me Inception seemed to run in parallel with something i enjoy reading or pondering over endlessly..viZ. mysticism and the words of mystics…yup…my forte 🙂

 So…naturally the first thing that came out of my mouth immediately after watching the movie was Adi Shankara’s words !

Brahman is real

world is unreal

Brahman is the world!

 
My dear husband had barely recouped from this spiritual outburst when Basavanna an eleventh century poet spoke through me 🙂
 
ಬಯಲೊಳಗೆ ಆಲಯವೋ ಆಲಯದೊಳಗೆ ಬಯಲೋ
ಬಯಲು ಆಲಯಗಲೆರಡೂ ನಿಮ್ಮೊಳಗೋ ದೇವ
 
I’m not implying that the story of  Inception has philosophical roots.It may or it may not..i don’t know.I’m not bothered from where Mr. Nolan got the story idea because this is about my perception of his Inception and not about his conception of Inception 🙂 Let me stop here before i exhaust my rhyming skills 🙂